ಲೋಕದ ಕಾಳಜಿ ಸಂತ ಶಿಶುನಾಳ ಷರೀಫ್ ರವರು ರಚಿಸಿರುವ ಒಂದು ಗೀತೆ. ಗೀತೆಯು ಉತ್ತರ ಕರ್ನಾಟಕದ ಉಪಭಾಷೆಯಲ್ಲಿ ರಚಿಸಲಾಗಿದೆ.

ಗೀತೆ
ಲೋಕದ ಕಾಳಜಿ ಮಾಡತೇನಂತಿ
ನಿಂಗ್ಯಾರ್ ಬ್ಯಾಡಾಂತಾರ, ಮಾದಪ್ಪ ಚಿಂತಿ! 

ನೀ ಮಾಡೋದು ಘಳಿಗಿ ಸಂತಿ
ಮೇಲು ಮಾಳಗಿ ಕಟ್ಟಬೇಕಂತಿ
ಆನೆ ಅಂಬಾರಿ ಏರಬೇಕಂತಿ
ಮಣ್ಣಲಿ ಇಳಿಯೂದ ಥಣ್ಣಗ ಮರತಿ!

[ಲೋಕದ ಕಾಳಜಿ...]

ಬದುಕು ಬಾಳೇವು ನಂದೇ ಅಂತಿ
ನಿಧಿ ಸೇರಿದಷ್ಟೂ ಸಾಲದು ಅಂತಿ
ಕದವ ತೆರೆದು ಕಡೆಯಾತ್ರೆಗೆ ನಡೆವಾಗ
ಒದಗದು ಯಾವುದೂ ಸುಮ್ಮನೆ ಅಳತಿ.

[ಲೋಕದ ಕಾಳಜಿ...]

ನೆಲೆಯು ಗೋವಿಂದನ ಪಾದದೊಳೈತಿ
ಅಲಕೊಂಡು ಹುಡುಕಿದಿರಿನೆಲ್ಲೈತಿ?
ಶಿಶುನಾಳಾಧೀಶನ ದಯೆಯೊಳಗೈತಿ
ರಸಿಕನು ಹಾಡಿದ ಕವಿತೆಯೊಳೈತಿ!

ಲೋಕದ ಕಾಳಜಿ ಮಾಡತೇನಂತಿ
ನಿಂಗ್ಯಾರ್ ಬ್ಯಾಡಾಂತಾರ, ಮಾದಪ್ಪ ಚಿಂತಿ!

ಉಲ್ಲೇಖಗಳು